ಚಂದ್ರಯಾನ - 3 ಸಾಪ್ಟ್ ಲ್ಯಾಂಡಿಂಗ್: ಬಾಹ್ಯಾಕಾಶ ಕೇತ್ರದಲ್ಲಿ ಹೊಸ ಇತಿಹಾಸ
Posted date: 24 Thu, Aug 2023 12:16:08 AM
ದಕ್ಷಿಣ ಧೃವದಲ್ಲಿ ಚಂದ್ರಯಾನ-3 ಯಶಸ್ವಿಯಾಗಿ ಇಳಿಯುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಈ ಮೂಲಕ ಭಾರತ ಚಂದ್ರನ ಮೇಲೆ ಇಳಿದ ಮೊದಲ ಮತ್ತು ವಿಶ್ವದ ನಾಲ್ಕನೇ ದೇಶವಾಗಿದೆ.

ಈ ಮೂಲಕ  ಅಮೇರಿಕಾ, ಚೀನಾ, ಸೋವಿಯತ್ ಒಕ್ಕೂಟದ ನಂತರ   ಚಂದ್ರಯಾನ-3 ಸಾಪ್ಟ್ ಲ್ಯಾಂಡಿಂಗ್ ಆಗುವ ಮೂಲಕ ಭಾರತ  ನಾಲ್ಕನೇ ದೇಶವಾಗಿ ಎಲೈಟ್ ಗುಂಪಿಗೆ ಸೇರ್ಪಡೆಯಾಗಿದೆ.

ಐತಿಹಾಸಿಕ ಚಂದ್ರನ ಸ್ಪರ್ಶಕ್ಕೆ ಮುನ್ನ ದೇಶಾದ್ಯಂತ ಚಂದ್ರಯಾನ- 3 ಯಶಸ್ವಿ ಲ್ಯಾಂಡಿಂಗ್ ಗಾಗಿ  ಪ್ರಾರ್ಥನೆಗಳು  ನಡೆಸಲಾಗಿತ್ತು. ಅದರ ಫಲ ಎನ್ನುವಂತೆ. ಚಂದ್ರಯಾನ-ಬಹಳ ಉತ್ಸಾಹದಿಂದ ನಡೆದವು.

ಚಂದ್ರಯಾನ-3 ಯಶಸ್ವಿಯಾಗಿ ಸಾಪ್ಟ್ ಲಾಂಡಿಂಗ್ ಆಗುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳ ಅವಿರತ ಶ್ರಮ ಫಲಿಸಿದೆ.

ಚಂದ್ರಯಾನ-3 ಮಿಷನ್ ಅನ್ನು ಜುಲೈ 14 ರಂದು ಶ್ರೀಹರಿಕೋಟಾದಿಂದ ಪ್ರಾರಂಭಿಸಲಾಯಿತು.ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಗೆ ಇಳಿಯಲು ಪ್ರಾರಂಭಿಸಿತು

ಪ್ರತಿ ಸೆಕೆಂಡಿಗೆ 1.68 ಕಿ.ಮೀ. ಚಂದ್ರನ ಮೇಲ್ಮೈಗೆ ಚಾಲಿತ ಲಂಬ ಅವರೋಹಣವನ್ನು ಪ್ರಾರಂಭಿಸುವ ಮೊದಲು ಅದು ನಿಧಾನವಾಗಿ ಇಳಿಯುವ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದೆ.

ಚಂದ್ರಯಾನ - 3 ಸಾಪ್ಟ್ ಲ್ಯಾಂಡಿಂಗ್ ನವ ಭಾರತದ ಉದಯ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಚಂದ್ರಯಾನ-3 ಚಂದ್ರನ ಮೇಲೆ ಇಳಿಯುತ್ತಿದ್ದಂತೆ ಪ್ರತಿಕ್ರಿಯೆ ನೀಡಿ ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ರಾಷ್ಟ್ರ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ ಎಂದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed